ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನ, ಅರೆಯೂರು, ತುಮಕೂರು

Temple Timings

Morning: 6:00 AM to 7:00 PM
Dasoha Prasadam: 12:30 PM to 2:00 PM


Mangalarathi: 9:00 AM
Maha Mangalarathi: 12:30 PM
Evening Mangalarathi: 6:30 PM Onwards


For More Details, Please Contact:
Prof. Shanthakumar - 9845285455

ಭಕ್ತರ ಅನುಭವಗಳು

ಶ್ರೀ ಸೂರಪ್ಪ
S/o ಶ್ರೀ ಮದ್ದಿಗನಾಯ್ಕ


ನನಗೆ ಸಕ್ಕರೆ ಖಾಯಿಲೆ ಜಾಸ್ತಿಯಾಗಿ ಸುಸ್ತಾಗುತ್ತಿತ್ತು. ಕೆಲಸ ಮಾಡಲು ಆಗುತ್ತಿರಲಿಲ್ಲ. ನರ್ಸಿಂಗ್ ಹೋಂಗೆ ಹೋಗಿ ಔಷಧೋಪಚಾರ ಮಾಡಿಸಿಕೊಂಡರೂ ಸಹ ಕಮ್ಮಿಯಾಗಲಿಲ್ಲ. ಆದ್ದರಿಂದ ನಮ್ಮಊರಿನ ಶ್ರೀ ವೈ...

Latest News - ಸುದ್ಧಿಗಳು

  • Facebook: areyurutemples
  • Twitter: areyurutemples
  • External Link: areyurusuresh.blogspot.com

ಇದುವರೆಗಿನ ವೀಕ್ಷಕರ ಸಂಖ್ಯೆ

Content View Hits : 116593

ಲೈವ್ ವೆಬ್ ವೀಕ್ಷಕರ ಸಂಖ್ಯೆ

We have 3 guests online

Font Problem?

This Website is in KANNADA Language and uses UNICODE [UTF-8 encoding] Font for its contents display. If you unable to read the content, or the content displays like ??????? or □ □ □ □ □, please install / replace this TUNGA unicode font to your computer. Set your browser to UTF-8 Encoding. Please refer the corresponding manuals of your browsers and Suitable Unicode fonts installation instructions for your Operating Systems.

ಮುಖಪುಟ ಭಕ್ತರ ಅನುಭವಗಳು

Devotees Experience - ಭಕ್ತರ ಅನುಭವಗಳು

ಮುಖ್ಯವಾಗಿ ಮಾರಕ ರೋಗಗಳಾದ ಕ್ಯಾನ್ಸರ್ ಹಾಗೂ ಹೃದಯ ರೋಗಗಳು ಯಾವುದೇ ರೀತಿಯ ಔಷಧೋಪಚಾರಗಳಿಲ್ಲದೆ ಅಥವಾ ಶಸ್ತ್ರಚಿಕಿತ್ಸೆಗಳಿಲ್ಲದೆ, ದೇವರಿಗೆ ಕೇವಲ ಪೂಜೆ, ಅಭಿಷೇಕ ಮಾಡಿಸಿ ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸುವುದರಿಂದ ಸಂಪೂರ್ಣವಾಗಿ ವಾಸಿಯಾಗುತ್ತದೆ ಎಂದು ಹೇಳಿದರೆ ಈ ವೈಜ್ಞಾನಿಕ ಯುಗದಲ್ಲಿ ನಂಬುವುದು ಕಷ್ಟವಾದರೂ ಸಹ ಇಲ್ಲಿ ವೈದ್ಯಕೀಯ ವಿಜ್ಞಾನಕ್ಕೆ ಸವಾಲಿನಂತೆ ಖಾಯಿಲೆಗಳು ವಾಸಿಯಾಗುತ್ತಿರುವುದು ಸತ್ಯವಾದ ವಿಚಾರ. ಆದರೆ ವಿಜ್ಞಾನಕ್ಕೆ ತಿಳಿಯದೇ ಇರುವುದೆಲ್ಲಾ ಸುಳ್ಳಾಗಿರುವುದಕ್ಕೆ ಸಾಧ್ಯವಿಲ್ಲವಲ್ಲವೇ? ಹೀಗೆ ಖಾಯಿಲೆ ವಾಸಿ ಮಾಡಿಕೊಂಡ ರೋಗಿಗಳ ಹಾಗೂ ಇಷ್ಟಾರ್ಥಗಳನ್ನು ಕೈಗೂಡಿಸಿಕೊಂಡ ನೂರಾರು ಭಕ್ತರ ಪೈಕಿ ನಮಗೆ ಹತ್ತಿರದ ಊರುಗಳಲ್ಲಿ ವಾಸಿಸುವ ಹಾಗೂ ಸುಲಭವಾಗಿ ಭೇಟಿ ಮಾಡಲು ಸಾಧ್ಯವಾದವರನ್ನು ನಾವುಗಳು (ದೇವಸ್ಥಾನದವರು) ಭೇಟಿ ಮಾಡಿ ಅವರ ಅನುಭವ ಮತ್ತು ಅವರ ವಿಳಾಸ ಹಾಗೂ ಫೋನ್ ನಂಬರ್‌ಗಳನ್ನು ಪಡೆದು ಈ ಕೆಳಕಂಡಂತೆ ನಮೂದಿಸಿದೆ.

areyuru007.jpg
ಭಕ್ತರ ಅನುಭವಗಳು
ನನ್ನ ಕ್ಯಾನ್ಸರ್ ಖಾಯಿಲೆ ಯಾವುದೇ ಔಷಧೋಪಚಾರಗಳಿಂದಲೂ ಗುಣವಾಗಿರಲಿಲ್ಲ. ಆದರೆ ಅರೆಯೂರಿನ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಅಭಿಷೇಕ ಮಾಡಿಸಿ ಹರಕೆ ಮಾಡಿಕೊಂಡ ಮೇಲೆ ನನ್ನ ಕ್ಯಾನ್ಸರ್ ಖಾಯಿಲೆ ಸಂಪೂರ್ಣವಾಗಿ ವಾಸಿಯಾಗಿದೆ.
 
Date of Posting: 01 May 2012
Posted By: ಶ್ರೀಮತಿ ಇಂದುಮತಿ w/o ಶ್ರೀ ಮರಿಯಣ್ಣ,
ಮೊಬೈಲ್: 9448697318, ದೂರವಾಣಿ ಸಂಖ್ಯೆ : +91-816-2291790, ಹೆತ್ತೇನಹಳ್ಳಿ, ತುಮಕೂರು ||ತಾ||
ನನ್ನ ಹೆಂಡತಿ ಕ್ಯಾನ್ಸರ್ ಖಾಯಿಲೆಯಾಗಿ ಯಾವುದೇ ಔಷಧೋಪಚಾರ ಹಾಗೂ ಚಿಕಿತ್ಸೆ ಮಾಡಿಸಿದರೂ ಗುಣವಾಗಿರಲಿಲ್ಲ ಆದರೆ ಅರೆಯೂರಿನ ಶ್ರೀ ವೈದ್ಯನಾಥೇಶ್ವರ ಸ್ವಾಮಿಗೆ ಅಭಿಷೇಕ ಮಾಡಿಸಿ ಕ್ಯಾನ್ಸರ್ ಖಾಯಿಲೆ ವಾಸಿ ಮಾಡಿಸಿದರೆ ಪ್ರತಿ ವರ್ಷವೂ ಬಂದು ಅಭಿಷೇಕ ಮಾಡಿಸುವುದಾಗಿ ಹರಕೆ ಮಾಡಿಕೊಂಡು ಆಗಾಗ್ಗೆ ಹೋಗಿ ಪೂಜೆ ಮಾಡಿಸುತ್ತಿದ್ದೆ. ಈಗ ಕ್ಯಾನ್ಸರ್ ಖಾಯಿಲೆ ಸಂಪೂರ್ಣವಾಗಿ ವಾಸಿಯಾಗಿದೆ.
 
Date of Posting: 01 May 2012
Posted By: ಶ್ರೀ ಕೆ. ಎಸ್. ಸಿದ್ದರಾಮಯ್ಯ, ಮುಖ್ಯ ಶಿಕ್ಷಕರು,
ಮೊಬೈಲ್: 9880103397, ಕುಂಕುಮನಹಳ್ಳಿ, ತುಮಕೂರು ||ತಾ||
ನನಗೆ 2002ನೇ ಇಸವಿಯಲ್ಲಿ (ನಮ್ಮ ಊರಿನ ಮಲ್ಲನರಸಯ್ಯನಿಗೆ ಕ್ಯಾನ್ಸರ್ ಖಾಯಿಲೆ ಬಂದ ಒಂದು ತಿಂಗಳ ನಂತರ) ಕ್ಯಾನ್ಸರ್ ಖಾಯಿಲೆಯಾಗಿ ಬೆಂಗಳೂರಿನ ಸರ್ಕಾರಿ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾಗಿ 2-3 ತಿಂಗಳು ಕಾಲ ಶುಷ್ರೂಶ್ರೆ ಮಾಡಿಸಿಕೊಂಡರು ಸಹ ಕ್ಯಾನ್ಸರ್ ಖಾಯಿಲೆ ಉಲ್ಬಣವಾದ್ದರಿಂದ ಡಾಕ್ಟರ್ ಬಿಡುಗಡೆ ಮಾಡಿದರು. ಆಗ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವರಿಗೆ ಮೊರೆ ಹೊಕ್ಕು ನನ್ನ ಖಾಯಿಲೆಯನ್ನು ವಾಸಿ ಮಾಡುವಂತೆ ಬೇಡಿಕೊಂಡು ಹರಕೆ ಮಾಡಿಕೊಂಡೆ ಮತ್ತು ದೇವಸ್ಥಾನಕ್ಕೆ ಆಗಾಗ್ಗೆ ಹೋಗಿ ಪೂಜೆ ಮಾಡಿಸುತ್ತಿದ್ದೆ. ಆದ್ದರಿಂದ ನನ್ನ ಕ್ಯಾನ್ಸರ್ ಖಾಯಿಲೆಯು 3-4 ತಿಂಗಳಲ್ಲಿ ಸಂಪೂರ್ಣವಾಗಿ ವಾಸಿಯಾಗಿದೆ.
 
Date of Posting: 01 May 2012
Posted By: ಶ್ರೀ ಯಲ್ಲಯ್ಯ, ಸಿದ್ದಪ್ಪನ ಪಾಳ್ಯ,
ಮೊಬೈಲ್: 9008831648, ಅರೆಯೂರು ಅಂಚೆ, ತುಮಕೂರು ||ತಾ||
ನನಗೆ 2002ನೇ ಇಸವಿಯಲ್ಲಿ ಗಂಟಲು ಕ್ಯಾನ್ಸರ್ ಖಾಯಿಲೆಯಾಗಿ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾಗಿ 3-4 ತಿಂಗಳೂ ಚಿಕಿತ್ಸೆ ಮಾಡಿಸಿಕೊಂಡರೂ ಸಹ ಕ್ಯಾನ್ಸರ್ ಖಾಯಿಲೆ ವಾಸಿಯಾಗಲಿಲ್ಲ ಬದಲಾಗಿ ಖಾಯಿಲೆ ಉಲ್ಬಣವಾಗಿ ಗಂಟಲಲ್ಲಿ ದ್ರವ ಪದಾರ್ಥಗಳೂ ಸಹ ಇಳಿಯುವುದು ಕಷ್ಟವಾಯಿತು.
ಆಗ ಆಸ್ಪತ್ರೆಯ ಡಾಕ್ಟರ್ ಖಾಯಿಲೆ ವಾಸಿಯಾಗುವುದಿಲ್ಲವೆಂದು ಹೇಳಿ ನನ್ನನ್ನು ಬಿಡುಗಡೆ ಮಾಡಿದರು. ಆಗ ನಮ್ಮ ಊರಿನ ಹಿರಿಯರ ಮಾರ್ಗದರ್ಶನದಂತೆ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪೂಜೆ ಮಾಡಿಸಿ ಹರಕೆ ಮಾಡಿಕೊಂಡು ನನ್ನ ಖಾಯಿಲೆಯನ್ನು ವಾಸಿ ಮಾಡುವಂತೆ ಶ್ರೀ ವೈದ್ಯನಾಥೇಶ್ವರ ಸ್ವಾಮಿಯನ್ನು ಪ್ರಾರ್ಥಿಸಿಕೊಂಡೆ ಮತ್ತು ಆಗಾಗ್ಗೆ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ದೇವರಲ್ಲಿ ವಾಸಿಮಾಡುವಂತೆ ಭಕ್ತಿಯಿಂದ ಬೇಡಿಕೊಳ್ಳುತ್ತಿದ್ದೆ. ನನ್ನ ಕ್ಯಾನ್ಸರ್ ಖಾಯಿಲೆಯು ಪವಾಡ ಸದೃಶ್ಯವಾಗಿ 3-4 ತಿಂಗಳಲ್ಲಿ ಸಂಪೂರ್ಣವಾಗಿ ವಾಸಿಯಾಗಿದೆ.
 
Date of Posting: 01 May 2012
Posted By: ಶ್ರೀ ಮಲ್ಲನರಸಯ್ಯ, ಸಿದ್ದಪ್ಪನ ಪಾಳ್ಯ
ಮೊಬೈಲ್: 9731338141, ಅರೆಯೂರು ಅಂಚೆ, ತುಮಕೂರು ||ತಾ||

<< Start Previous 1 2 Next Last >>

Page 2 of 2


Submit A Testimonial
* fields are mandatory.
Your Name:*
Email Address:*
About You:
Your Location:
Your Website:
Your Picture:
Images should not be larger than 500x500 px and 250 kb
Security Code:
Enter Code Here:*
Send us your comments below:*