ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನ, ಅರೆಯೂರು, ತುಮಕೂರು

Temple Timings

Morning: 6:00 AM to 7:00 PM
Dasoha Prasadam: 12:30 PM to 2:00 PM


Mangalarathi: 9:00 AM
Maha Mangalarathi: 12:30 PM
Evening Mangalarathi: 6:30 PM Onwards


For More Details, Please Contact:
Prof. Shanthakumar - 9845285455

ಭಕ್ತರ ಅನುಭವಗಳು

ಶ್ರೀ ಕೆ. ಎಸ್. ಸಿದ್ದರಾಮಯ್ಯ,
ಮುಖ್ಯ ಶಿಕ್ಷಕರು,


ನನ್ನ ಹೆಂಡತಿ ಕ್ಯಾನ್ಸರ್ ಖಾಯಿಲೆಯಾಗಿ ಯಾವುದೇ ಔಷಧೋಪಚಾರ ಹಾಗೂ ಚಿಕಿತ್ಸೆ ಮಾಡಿಸಿದರೂ ಗುಣವಾಗಿರಲಿಲ್ಲ ಆದರೆ ಅರೆಯೂರಿನ ಶ್ರೀ ವೈದ್ಯನಾಥೇಶ್ವರ ಸ್ವಾಮಿಗೆ ಅಭಿಷೇಕ ಮಾಡಿಸಿ ಕ್ಯಾನ್ಸರ್ ಖಾಯಿ...

Latest News - ಸುದ್ಧಿಗಳು

  • Facebook: areyurutemples
  • Twitter: areyurutemples
  • External Link: areyurusuresh.blogspot.com

ಇದುವರೆಗಿನ ವೀಕ್ಷಕರ ಸಂಖ್ಯೆ

Content View Hits : 116183

ಲೈವ್ ವೆಬ್ ವೀಕ್ಷಕರ ಸಂಖ್ಯೆ

We have 18 guests online

Font Problem?

This Website is in KANNADA Language and uses UNICODE [UTF-8 encoding] Font for its contents display. If you unable to read the content, or the content displays like ??????? or □ □ □ □ □, please install / replace this TUNGA unicode font to your computer. Set your browser to UTF-8 Encoding. Please refer the corresponding manuals of your browsers and Suitable Unicode fonts installation instructions for your Operating Systems.

ಮುಖಪುಟ ಭಕ್ತರ ಅನುಭವಗಳು

Devotees Experience - ಭಕ್ತರ ಅನುಭವಗಳು

ಮುಖ್ಯವಾಗಿ ಮಾರಕ ರೋಗಗಳಾದ ಕ್ಯಾನ್ಸರ್ ಹಾಗೂ ಹೃದಯ ರೋಗಗಳು ಯಾವುದೇ ರೀತಿಯ ಔಷಧೋಪಚಾರಗಳಿಲ್ಲದೆ ಅಥವಾ ಶಸ್ತ್ರಚಿಕಿತ್ಸೆಗಳಿಲ್ಲದೆ, ದೇವರಿಗೆ ಕೇವಲ ಪೂಜೆ, ಅಭಿಷೇಕ ಮಾಡಿಸಿ ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸುವುದರಿಂದ ಸಂಪೂರ್ಣವಾಗಿ ವಾಸಿಯಾಗುತ್ತದೆ ಎಂದು ಹೇಳಿದರೆ ಈ ವೈಜ್ಞಾನಿಕ ಯುಗದಲ್ಲಿ ನಂಬುವುದು ಕಷ್ಟವಾದರೂ ಸಹ ಇಲ್ಲಿ ವೈದ್ಯಕೀಯ ವಿಜ್ಞಾನಕ್ಕೆ ಸವಾಲಿನಂತೆ ಖಾಯಿಲೆಗಳು ವಾಸಿಯಾಗುತ್ತಿರುವುದು ಸತ್ಯವಾದ ವಿಚಾರ. ಆದರೆ ವಿಜ್ಞಾನಕ್ಕೆ ತಿಳಿಯದೇ ಇರುವುದೆಲ್ಲಾ ಸುಳ್ಳಾಗಿರುವುದಕ್ಕೆ ಸಾಧ್ಯವಿಲ್ಲವಲ್ಲವೇ? ಹೀಗೆ ಖಾಯಿಲೆ ವಾಸಿ ಮಾಡಿಕೊಂಡ ರೋಗಿಗಳ ಹಾಗೂ ಇಷ್ಟಾರ್ಥಗಳನ್ನು ಕೈಗೂಡಿಸಿಕೊಂಡ ನೂರಾರು ಭಕ್ತರ ಪೈಕಿ ನಮಗೆ ಹತ್ತಿರದ ಊರುಗಳಲ್ಲಿ ವಾಸಿಸುವ ಹಾಗೂ ಸುಲಭವಾಗಿ ಭೇಟಿ ಮಾಡಲು ಸಾಧ್ಯವಾದವರನ್ನು ನಾವುಗಳು (ದೇವಸ್ಥಾನದವರು) ಭೇಟಿ ಮಾಡಿ ಅವರ ಅನುಭವ ಮತ್ತು ಅವರ ವಿಳಾಸ ಹಾಗೂ ಫೋನ್ ನಂಬರ್‌ಗಳನ್ನು ಪಡೆದು ಈ ಕೆಳಕಂಡಂತೆ ನಮೂದಿಸಿದೆ.

areyuru005.jpg
ಭಕ್ತರ ಅನುಭವಗಳು
Namste...my name is vachan, i have completed my 2nd pu in sarvodaya pu college,tumkur...my mother was suffering from cancer...it was just a prilluminary stage..v had all kind of treatment for her diseases.in b'lore....bt was of no use...:( one of my father's friend suggested to visit this temple...v came her n took vaidyanatheshwara's blessings...within 2 and a half months my mother was getting cure...i strongly believe that it was the purity of water (theertha) given by the god...:) so i wish you to pls visitt this wonderful place...:) its a place of devine vaidyanatheshwara..and i strongly believe that all typs of diseases are cured by this swamy in areyuru...:) thank u...:)
 
Date of Posting: 12 August 2012
Posted By: vachan bharadwaj
i am student, tumkur,sapthagiri extn.11th link road
Vaidyanatheshwara na daye enda nanage olle nemmadi sikkide....dina bagavantha dyana madutirutini.....bagavanthana sannidanakke matte matte barabeku anisutte....bagavantanu bahala olleyadannu madiddane.....OM SHREE VAIDYANATHESHWARAYA NAMAHA!!!
 
Date of Posting: 01 July 2012
Posted By: Ravishankar Patil
Ravishankar Patil - Deputy Manager, Malaysia
ನನಗೆ ವೈರಸ್ ಖಾಯಿಲೆಯಾಗಿ ಕೈ ಕಾಲುಗಳು ಸ್ವಾದೀನವಿಲ್ಲದೆ ನಡೆದಾಡಲು ಆಗುತ್ತಿರಲಿಲ್ಲ. ಪರಿಣತ ತಜ್ಞ ವೈದ್ಯರಿಗೆ ತೋರಿಸಿ ಔಷಧೋಪಚಾರ ಪಡೆದರೂ ಸಹ ಗುಣಕಾಣಲಿಲ್ಲ. ನನ್ನ ಪರವಾಗಿ ನನ್ನ ಸ್ನೇಹಿತರಾದ ಮೈದಾಳದ ಶ್ರೀ ಪುಟ್ಟರೇವಯ್ಯನವರು ಶ್ರೀ ವೈದ್ಯನಾಥೇಶ್ವರ ಸ್ವಾಮಿಗೆ ಪೂಜೆ ಮಾಡಿಸಿ ಪ್ರಾರ್ಥಿಸಿಕೊಂಡಿದ್ದರಿಂದ ನನಗೆ ಗುಣವಾಗಿದೆ.
 
Date of Posting: 01 May 2012
Posted By: ಶ್ರೀ ವಿ. ಕೃಷ್ಣಮೂರ್ತಿ S/o ಶ್ರೀ ವಜ್ರಪ್ಪ
ಉಂಗ್ರ, ಕುಣಿಗಲ್ ತಾಲ್ಲೂಕು
ನನಗೆ ಮಕ್ಕಳಿರಲಿಲ್ಲ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವರಿಗೆ ಅಭಿಷೇಕ ಮಾಡಿಸಿ ಪ್ರತಿ ವರ್ಷ ಬಂದು ಅಭಿಷೇಕ ಮಾಡಿಸುವುದಾಗಿ ಹರಕೆ ಮಾಡಿಕೊಂಡ ಮೇಲೆ ನನಗೆ ಗಂಡು ಮಗು ಆಗಿದೆ.
 
Date of Posting: 01 May 2012
Posted By: ಶ್ರೀಮತಿ ಶಾರದಮ್ಮ, ಕರಿಗೌಡನಹಳ್ಳಿ
ಗುಬ್ಬಿ ತಾಲ್ಲೂಕು
ನನಗೆ ಮೂತ್ರಕೋಶದ ಖಾಯಿಲೆಯಾಗಿ ಮೂತ್ರದ ಜೊತೆಯಲ್ಲಿ ರಕ್ತ ಹೋಗುತ್ತಿತ್ತು, ಬಹಳ ನೋವು ಆಗುತ್ತಿತ್ತು. ತಜ್ಞ ವೈದ್ಯರಿಂದ ಔಷಧೋಪಚಾರ ಮಾಡಿಸಿಕೊಂಡರೂ ಸಹ ವಾಸಿಯಾಗಲಿಲ್ಲ. ಆದರೆ ಅರೆಯೂರಿನ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪೂಜೆ ಮಾಡಿಸಿ ಅಭಿಷೇಕ ಮಾಡಿಸುವುದಾಗಿ ಹರಕೆ ಮಾಡಿಕೊಂಡು ಆಗಾಗ್ಗೆ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಖಾಯಿಲೆ ವಾಸಿ ಮಾಡುವಂತೆ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ ನನ್ನ ಖಾಯಿಲೆ ಶೇ.75 ಭಾಗ ವಾಸಿಯಾಗಿದೆ. ಪೂರ್ಣ ವಾಸಿಯಾಗುತ್ತದೆ ಎಂಬ ನಂಬಿಕೆ ನನಗಿದೆ.
 
Date of Posting: 01 May 2012
Posted By: ಶ್ರೀ ಪುಟ್ಟ ಹನುಮಯ್ಯ
ಮೊಬೈಲ್: 9972746748, ಬಿ. ಹೆಚ್. ರಸ್ತೆ, ಹೆಗ್ಗೆರೆ ಬಡಾವಣೆ, ತುಮಕೂರು ನಗರ
ನನಗೆ ಗಂಡಮಾಲೆ ರೋಗವಾಗಿ ಆಹಾರ ಪದಾರ್ಥಗಳು ಗಂಟಲಲ್ಲಿ ಇಳಿಯುತ್ತಿರಲಿಲ್ಲ. ಶ್ರೀ ವೈದ್ಯನಾಥೇಶ್ವರ ಸ್ವಾಮಿಗೆ ಪೂಜೆ ಮಾಡಿಸಿ ಹರಕೆ ಮಾಡಿಕೊಂಡು ನನ್ನ ಖಾಯಿಲೆಯನ್ನು ಮಾಸಿ ಮಾಡುವಂತೆ ಮನಸ್ಸಿನಲ್ಲಿ ಪ್ರಾರ್ಥಿಸುತ್ತಿದ್ದೆ. ಈಗ ನನ್ನ ಗಂಡಮಾಲೆ ಖಾಯಿಲೆ ಸಂಪೂರ್ಣವಾಗಿ ವಾಸಿಯಾಗಿದೆ.
 
Date of Posting: 01 May 2012
Posted By: ಶ್ರೀಮತಿ ಸಿದ್ದಗಂಗಮ್ಮ W/o ಶ್ರೀ ಸೂರಪ್ಪ
ಮೊಬೈಲ್: 9342237397, ಅರೆಯೂರು ಅಂಚೆ, ತುಮಕೂರು ||ತಾ||
ನನಗೆ ಸಕ್ಕರೆ ಖಾಯಿಲೆ ಜಾಸ್ತಿಯಾಗಿ ಸುಸ್ತಾಗುತ್ತಿತ್ತು. ಕೆಲಸ ಮಾಡಲು ಆಗುತ್ತಿರಲಿಲ್ಲ. ನರ್ಸಿಂಗ್ ಹೋಂಗೆ ಹೋಗಿ ಔಷಧೋಪಚಾರ ಮಾಡಿಸಿಕೊಂಡರೂ ಸಹ ಕಮ್ಮಿಯಾಗಲಿಲ್ಲ. ಆದ್ದರಿಂದ ನಮ್ಮಊರಿನ ಶ್ರೀ ವೈದ್ಯನಾಥೇಶ್ವರ ಸ್ವಾಮಿಯನ್ನು ನೀನೇ ದಿಕ್ಕೆಂದು ಬೇಡಿಕೊಂಡು ನಂಬಿ ಅಭಿಷೇಕ ಮಾಡಿಸಿ ಪ್ರತಿ ವರ್ಷ ಅಭಿಷೇಕ ಮಾಡಿಸುತ್ತೇನೆಂದು ಹರಕೆ ಮಾಡಿಕೊಂಡೆ ಸುಮಾರು 3 ತಿಂಗಳಲ್ಲಿ ನನ್ನ ಸಕ್ಕರೆ ಖಾಯಿಲೆ ವಾಸಿಯಾಗಿದೆ.
 
Date of Posting: 01 May 2012
Posted By: ಶ್ರೀ ಸೂರಪ್ಪ S/o ಶ್ರೀ ಮದ್ದಿಗನಾಯ್ಕ
ಮೊಬೈಲ್: 9342237397, ಅರೆಯೂರು ಅಂಚೆ, ತುಮಕೂರು ||ತಾ||
ನನಗೆ ನರಗಳ ದೌರ್ಬಲ್ಯ ಖಾಯಿಲೆ (ಡಾಕ್ಟರ್ ಹೇಳುವ ಪ್ರಕಾರ GD-Syndrome) ಯಾಗಿ ನರಳುತ್ತಿದ್ದೆ. ತಜ್ಞ ವೈದ್ಯರಿಂದ ಔಷಧೋಪಚಾರ ಮಾಡಿಸಿಕೊಂಡರೂ ಸಹ ಖಾಯಿಲೆ ವಾಸಿಯಾಗಲಿಲ್ಲ. ಆದರೆ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ವರ್ಷಕ್ಕೊಮ್ಮೆ ಬಂದು ಅಭಿಷೇಕ ಮಾಡಿಸುವುದಾಗಿ ಹರಕೆ ಮಾಡಿಕೊಂಡಿದ್ದರಿಂದ 4-5 ತಿಂಗಳಲ್ಲಿ ನನ್ನ ಖಾಯಿಲೆ ಪವಾಡ ಸದೃಶ್ಯವಾಗಿ ವಾಸಿಯಾಗಿದೆ.
 
Date of Posting: 01 May 2012
Posted By: ಶ್ರೀ ಬಿ. ಎಸ್. ನೀಲಕಂಠಯ್ಯ S/o ಲೇಟ್. ಶಿವಣ್ಣ,
ದೂರವಾಣಿ ಸಂಖ್ಯೆ :+91-816-280018 ಮೊಬೈಲ್ : 9964524017, ಬಂಡಿಹಳ್ಳಿ, ಗುಬ್ಬಿ ||ತಾ||
ನನಗೆ ಲಿವರ್ ಸಿರೋಸಿಸ್ ಎಂಬ ಖಾಯಿಲೆಯಾಗಿ ಎರಡು ವರ್ಷದಿಂದ ತೊಂದರೆ ಪಡುತ್ತಿದ್ದೆ. ನನ್ನ ಪಿತ್ತಜನಕಾಂಗ (Liver) ನಿಷ್ಕ್ರೀಯವಾಗಿದೆ ಎಂದು ಡಾಕ್ಟರ್ ಹೇಳಿದ್ದರು. ಇದಕ್ಕೆ ತಜ್ಞ ವೈದ್ಯರಿಂದ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡರೆ ಮಾತ್ರ ಖಾಯಿಲೆ ವಾಸಿಯಾಗುತ್ತದೆ ಎಂದು ಡಾಕ್ಟರ್‌ಗಳು ಹೇಳಿದ್ದರು. ಆದರೆ ಅಂತಹ ಅನುಭವ ತಜ್ಞ ವೈದ್ಯರನ್ನು ಎಲ್ಲಾ ಕಡೆ ಹುಡುಕಿದರು ಯಾರೂ ಸಿಕ್ಕಿರಲಿಲ್ಲ. ನನಗೆ ದಿಕ್ಕೇ ತೋಚದಾಯಿತು. ಅದೇ ಸಮಯದಲ್ಲಿ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವರಿಗೆ ಮೊರೆ ಹೊಕ್ಕರೆ ಖಾಯಿಲೆ ವಾಸಿಯಾಗುತ್ತದೆ ಎಂಬ ವಿಚಾರವನ್ನು ಜನರ ಮೂಲಕ ತಿಳಿದುಕೊಂಡು, ನಾವು ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ದೇವರಿಗೆ ಪೂಜೆ ಮಾಡಿಸಿ ನಾನು ದೇವರನ್ನು ಈ ರೀತಿ ಪ್ರಾರ್ಥಿಸಿದೆ ಸ್ವಾಮಿ ನೀನು ನನ್ನ ಖಾಯಿಲೆಯನ್ನು ವಾಸಿ ಮಾಡು ಅಥವಾ ಖಾಯಿಲೆ ವಾಸಿ ಮಾಡಿಸಿಕೊಳ್ಳುವುದಕ್ಕೆ ದಾರಿ ತೋರಿಸುವಂತೆ ಪ್ರಾರ್ಥಿಸಿದೆ. ಹೀಗೆ ನಾನು ದೇವಸ್ಥಾನಕ್ಕೆ ಹೋಗಿ ಬಂದ 5 ದಿವಸ ಆದ ಮೇಲೆ ನನ್ನ ಮಗಳು ಇಂಟರ್‌ನೆಟ್ ನಲ್ಲಿ ನೋಡುತ್ತಿದ್ದಾಗ ಒಂದು ವೆಬ್ ಸೈಟ್ ನಲ್ಲಿ ಲಿವರ್ ಸಿರೋಸಿಸ್ ಖಾಯಿಲೆಗೆ ಶಸ್ತ್ರ ಚಿಕಿತ್ಸೆಯನ್ನು ಡೆಲ್ಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ಮಾಡುವುದಾಗಿ ಗೊತ್ತಾಗಿ ನಾವು ಡೆಲ್ಲಿಗೆ ಹೋಗಿ ಗಂಗಾರಾಮ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಾನು ಈಗ ಆರೋಗ್ಯವಾಗಿದ್ದೇನೆ. ನನ್ನ ಖಾಯಿಲೆ ವಾಸಿ ಮಾಡಲು ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವರೇ ನನಗೆ ದಾರಿ ತೋರಿದನೆಂದು ನಂಬಿದ್ದೇನೆ. ಆದ್ದರಿಂದ ನಾನು ಈಗಲೂ ಆಗಾಗ್ಗೆ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತಿದ್ದೇನೆ.
 
Date of Posting: 01 May 2012
Posted By: ಶ್ರೀ ಅಶೋಕ್ ಕುಮಾರ್ ಜೈನ್,
ಮೊಬೈಲ್ : 9448174003, 1ನೇ ಮುಖ್ಯ ರಸ್ತೆ, ಜೈನ್ ಟೆಂಪಲ್ ಹತ್ತಿರ, ತುಮಕೂರು.
2007ನೇ ಇಸವಿಯಲ್ಲಿ ನನಗೆ ಕಿಡ್ನಿ ವೈಪಲ್ಯವಾಗಿ ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಔಷಧೋಪಚಾರ ಮಾಡಿಸಿಕೊಂಡರೂ ಸಹ ನನ್ನ ಖಾಯಿಲೆ ವಾಸಿಯಾಗಲಿಲ್ಲ. ಆದರೆ ಅರೆಯೂರಿನ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ದೇವರಿಗೆ ಅಭಿಷೇಕ ಮಾಡಿಸಿ ಪ್ರತಿ ವರ್ಷವೂ ಬಂದು ಅಭಿಷೇಕ ಮಾಡಿಸುವುದಾಗಿ ಹರಕೆ ಮಾಡಿಕೊಂಡ ಮೇಲೆ ನನ್ನ ಕಿಡ್ನಿ ಖಾಯಿಲೆ ವೈಪಲ್ಯ ಮುಂದುವರೆಯದೆ (ಕಿಡ್ನಿ ಡ್ಯಾಮೇಜ್ ಆಗುವುದು ನಿಂತಿದೆ) ಅಷ್ಟಕ್ಕೆ ನಿಂತಿದೆ. ನನಗೆ ಕಿಡ್ನಿ ವೈಪಲ್ಯಗಳು ವಾಸಿಯಾಗುವ ಲಕ್ಷಣಗಳು ಕಾಣುತ್ತಿವೆ. ಖಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆ ನನಗೆ ಬಂದಿದೆ.
 
Date of Posting: 01 May 2012
Posted By: ಶ್ರೀ ಸಿ.ಎನ್. ಭೋರಯ್ಯ, ನಿವೃತ್ತ ರೆವಿನ್ಯೂ ಇನ್‌ಸ್ಪೆಕ್ಟರ್,
ಮೊಬೈಲ್ : 9379701256, ಮನೆ ನಂಬರ್ 62, ಶಾರದಾದೇವಿನಗರ (ಸ್ಟೇಡಿಯಂ ಹಿಂಭಾಗ), ತುಮಕೂರು ನಗರ.

<< Start Previous 1 2 Next Last >>

Page 1 of 2


Submit A Testimonial
* fields are mandatory.
Your Name:*
Email Address:*
About You:
Your Location:
Your Website:
Your Picture:
Images should not be larger than 500x500 px and 250 kb
Security Code:
Enter Code Here:*
Send us your comments below:*